Saturday, March 20, 2021

ನನ್ನ ಕಂಡ್ರೆ ಯಾರಿಗೂ ಆಗಲ್ಲ :-(

ನೋಡಿ ಈ ಹಕ್ಕಿಯನ್ನು ತುಳುಭಾಷೆಯಲ್ಲಿ "ಬಿಜಿಕೆರೆ ಹಕ್ಕಿ" ಎನ್ನುತ್ತಾರೆ. ಬಿಜಿಕೆರೆ ಅಂದ್ರೆ ಒಣಗಿದ ಎಲೆಗಳು. ಅದರ ಮೇಲೆ ನಡೆದಾಡಿದಾಗ ಕಚ-ಕಚ ಹೇಗೆ ಶಬ್ದ ಬರುವುದೋ, ಅದೇ ತರಹ ಈ ಹಕ್ಕಿಗಳು ಕೂಡಾ ಜಾಲಿಯಾಗಿ, ಉತ್ಸಾಹದಿಂದ, ಕೊಂಬೆಯಿಂದ ಕೊಂಬೆಗೆ, ಮೇಲಿಂದ ಕೆಳಕ್ಕೆ ಉಲ್ಲಾಸದಿಂದ ಕಚ-ಕಚ ಶಬ್ದ ಮಾಡುತ್ತಾ ಹಾರುತ್ತಿರುತ್ತದೆ. ಬೆಳಗ್ಗೆ ಶಬ್ದ ಕೇಳದಿದ್ದರೆ ಏನೋ ಕಳೆದುಹೋದಂತೆ ನನಗೆ. ದೂರದಿಂದಲೇ ತಿಳಿಯುವುದು ಇವುಗಳು ಬರುತ್ತಿದ್ದರೆ ಅನ್ನೋದು :-D. ಜಾಲಿಯಿಂದ ಇದಾವೋ  ಅಥವಾ ಜಗಳ ಆಡ್ತಾ ಇದಾವೋ ಅಂತಾನೆ ಗೊತ್ತಾಗಲ್ಲ. ನನಗೆ ತುಂಬಾ ಖುಷಿ ಅವುಗಳು ಬಂದ್ರೆ. ತುಂಬಾ ಹಾಸ್ಯಮಯ ಅವುಗಳ ವರ್ತನೆಗಳು :-)

ಮೂಲ ವಿಷಯಕ್ಕೆ ಬರುವ. ಸಂಜೆ ಸೈಕಲ್ ತುಳಿಯುತ್ತಿದ್ದಾಗ ಆಕಸ್ಮಿಕವಾಗಿ ಕಂಡ ದೃಶ್ಯ ಇದು. ಏನೋ ಗುಂಪಿನಲ್ಲಿ ಜಗಳ ನಡಿತಿತ್ತು. ಅದಕ್ಕೆ ಈ ಹಕ್ಕಿ ಇತರ ಸಪ್ಪೆ ಮೊರೆ ಹಾಕಿಕೊಂಡು ಮರದ ಕೊಂಬೆಯಲ್ಲಿ ಸಪ್ಪೆಯಾಗಿ ಕುಳಿತಿತ್ತು. ಯಾವಾಗಲೂ ಕಚ-ಕಚ ಅಂತಾ ಅನ್ನೋರು ಬಹಳ ಹೊತ್ತು ನಿಶ್ಶಬ್ದಕ್ಕೆ ಮೊರೆ ಹೋದಾಗ ನಾನು ಕ್ಲಿಕ್ಕಿಸಿದ್ದು. 


ಮೊದಲ ಬಾರಿಗೆ red vented bulbul ಹಕ್ಕಿಯನ್ನು ಕಂಡಿದ್ದರಿಂದ ಅದರದ್ದೇ ಚಿತ್ರಗಳನ್ನು ತೆಗೆಯುತ್ತಿದ್ದೆ. ಈ ಪಕ್ಷಿ ಅಡ್ಡ ಬಂದರು ಅದರ ಕಡೆ ಗಮನ ಕೊಡದೆ ಇದ್ದರಿಂದ ಅದಕ್ಕೆ ಕೋಪ ಬಂದಿರಲು ಬಹುದು :-). "ನೋಡಪ್ಪಾ ಹೊಸಬರು ಸಿಕ್ಕಿದ್ರು ಅಂತಾ ನಮ್ಮನ್ನೆಲ್ಲ ಅಸಡ್ಡೆ ಮಾಡೋದಾ. ನಮ್ಮ ಹಾಡು ನಿಮಗೆ ಇಷ್ಟ ಆಗದೆ ಇರಬಹುದು. ನಮ್ಮ ಬಣ್ಣವು ಅಷ್ಟೇನೂ ಸುಂದರವಾಗಿಲ್ಲ. ಹಾಗಂತ ನಮ್ಮನ್ನ ಮೂಲೆಗುಂಪು ಮಾಡ್ಬೇಡ ಕಣಯ್ಯಾ :-(", ಅಂತ ಸಪ್ಪೆ ಮುಖ ಮಾಡಿಕೊಂಡು ಕುಳಿತಂತೆ ಇತ್ತು. ಅದರ ಖುಷಿಗಾಗಿ ಒಂದು ಚಂದದ ಚಿತ್ರ ಕ್ಲಿಕ್ಕಿಸಿ ಸೈಕಲ್ ಸವಾರಿ ಮುಂದುವರೆಸಿದೆ. 

ಮತ್ತಷ್ಟು ಹಕ್ಕಿ ಸರಣಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ :  NKBirdSeries

No comments:

Post a Comment

Printfriendly

Related Posts Plugin for WordPress, Blogger...